BHOPAL DAY

 

ಭೂಪಾಲ್ಅನಿಲ ದುರಂತ

 

ಭೂಪಾಲ್ ನಗರವು ಮಧ್ಯಪ್ರದೇಶದ ರಾಜಧಾನಿಯಾಗಿದ್ದು ಇದು ಇತಿಹಾಸ ಪ್ರಸಿದ್ಧವಾದ ನಗರವಾಗಿದೆ. ಈ ನಗರವನ್ನು ಭೂಪಾಲ ಎಂಬ ಪ್ರಸಿದ್ಧ ರಾಜನೊಬ್ಬ ಕಟ್ಟಿರಬಹುದು ಎಂಬ ನಂಬಿಕೆ ಇತಿಹಾಸದಲ್ಲಿ ನಾವು ಕಾಣಬಹುದಾಗಿದೆ, ಹಾಗೂ ಕಾಳಿದಾಸರಂತಹ ಪ್ರಸಿದ್ಧ ಕವಿ ಈ ನಗರದ ಹಿರಿಮೆಗೆ ಕಾರಣರಾಗಿರುತ್ತಾರೆ.

ಭಾರತದಲ್ಲಿ ಅತ್ಯಂತ ಸುಂದರವಾದ ನಗರಗಳಲ್ಲಿ ಒಂದಾದ ಭೂಪಾಲ್ ನಗರವು ಪ್ರವಾಸಿಗರ ಸ್ವರ್ಗವೆಂದೆ ಕರೆಯಲ್ಪಡುವುದು. ಇಲ್ಲಿ ನೋಡಬಹುದಾದ  ಪ್ರಸಿದ್ಧ ಸ್ಥಳಗಳಲ್ಲಿ ಒಂದು ಬಿಂಬೆಟ್ಕ . ಅಲ್ಲಿ ಆದಿಮಾನವರುಗಳು ವಾಸಿಸುತ್ತಿದ್ದ ಗುಹೆಗಳು ಹಾಗೂ ಅಲ್ಲಿ ಅವರುಗಳು ಬಿಡಿಸಿದಂತಹ ಚಿತ್ರಗಳನ್ನು ಇಂದಿನ ದಿನಕ್ಕೂ ನಾವು ನೋಡಬಹುದಾಗಿದೆ. ಇದಲ್ಲದೆ ಇತರೆ ಪ್ರವಾಸಿ ಸ್ಥಳಗಳಾದ ಲಕ್ಷ್ಮೀನಾರಾಯಣ ದೇವಾಲಯ ಅಥವಾ ಬಿರ್ಲಾ ಮಂದಿರ್,  ಖಾಲಿ ಘಾಟ್, ಗುಫಾ ಮಂದಿರ್, ಒಂದು ಜೈನ ದೇವಾಲಯ ಹಾಗೂ ಮೊಘಲರ ಆಳ್ವಿಕೆಯಲ್ಲಿ ಕಟ್ಟಿರುವ ಹಲವಾರು ಪ್ರಸಿದ್ಧ ಮಸೀದಿಗಳನ್ನು ಸಹ ನಾವು ನೋಡಬಹುದಾಗಿದೆ.

ಆದರೆ ಇಂದಿನ ದಿನ ಭೋಪಾಲ್ ನಗರವು ಒಂದು ಕೆಟ್ಟ ದುರಂತಕ್ಕೆ ಸಿಕ್ಕಿ ಬಳಲುತ್ತಿದೆ, ಅದೇ ಅನಿಲ ದುರಂತ. 28 ವರ್ಷಗಳ ಹಿಂದೆ 1984ರ ಡಿಸೆಂಬರ್ ಮೂರನೇ ತಾರೀಕಿನಂದು ನಡೆದ ಈ ಘಟನೆ ಪ್ರಪಂಚದಲ್ಲಿ ಅತ್ಯಂತ ಭಯಾನಕವಾದ ದುರಂತವೆಂದರೆ ತಪ್ಪಾಗಲಾರದು. ಭೂಪಾಲ್ ನಗರದ ಮಧ್ಯಭಾಗದಲ್ಲಿ ಸ್ಥಾಪಿಸಲ್ಪಟ್ಟಿದ್ದ ಕೀಟನಾಶಕ ರಾಸಾಯನಿಕ ಪದಾರ್ಥವನ್ನು ತಯಾರಿಸುವ ಒಂದು ಕಾರ್ಖಾನೆಯಿಂದ ಹೊರಬಂದ ಅಪಾಯಕಾರಿ ಅನಿಲ ಈ ಘಟನೆಗೆ ಕಾರಣವಾಗಿದೆ.

 

ದುರಂತಕ್ಕೆ ಕಾರಣವಾದ ಅಂಶಗಳು :-

ಆ ಕಾರ್ಖಾನೆಯಿಂದ ಹೊರಬಂದಸುಮಾರು42ಟನ್ಗಳಷ್ಟುಅಪಾಯಕಾರಿ ಮಿಥೈಲ್  ಐಸೋ ಸೈನೆಟ್ ( Methyl isocynate) ಎಂಐಸಿ (M I C) ಅನಿಲದಿಂದಾಗಿ ಸುಮಾರು 5ಲಕ್ಷ 20,000ಜನರಿಗೆ ತೊಂದರೆ ಉಂಟಾಗಿದೆ. ಎಂಐಸಿ (M I C) ಅನಿಲವು ಬಹಳ ಅಪಾಯಕಾರಿ ಹಾಗೂ ಪರಿಣಾಮಕಾರಿಯಾದ ಒಂದು ರಾಸಾಯನಿಕ ಕಚ್ಚಾ ವಸ್ತುವಾಗಿದ್ದು ಇದನ್ನು ಆ ಕಾರ್ಖಾನೆಯಲ್ಲಿ ಕೀಟನಾಶಕ ಪದಾರ್ಥ ತಯಾರಿಕೆಯಲ್ಲಿ ಉಪಯೋಗಿಸುತ್ತಿದ್ದರು.

ಆ ಎಂ ಐ ಸಿ (M I C) ಅನಿಲದೊಂದಿಗೆ ನೀರು ಮಿಶ್ರಣಗೊಂಡಾಗ ಅತ್ಯಂತ ತೀವ್ರ ಮಟ್ಟದಲ್ಲಿ ಉಷ್ಣತೆ ಉಂಟಾಗಿ ಒತ್ತಡ ಹೆಚ್ಚಾಯಿತು. ಈ ಒತ್ತಡದಿಂದಾಗಿ ಶೇಖರಿಸಿಟ್ಟಿದ್ದಟ್ಯಾಂಕುಗಳಿಂದ ಎಂ ಐ ಸಿ(M I C) ಅನಿಲವು ಹೊರಬಂದುಕಾರ್ಖಾನೆ ಹೊರಭಾಗಕ್ಕೆ ಅಂದರೆ ಜನರು ವಾಸಿಸುತ್ತಿದ್ದ ಪ್ರದೇಶದ ಕಡೆಗೆ ಹರಡಲ್ಪಟ್ಟಿತು. ಆ ಕಾರ್ಖಾನೆಯಲ್ಲಿ ಆಗ ಯಾವುದೇ ರೀತಿಯ ಎಚ್ಚರಿಕೆ ಸೂಚಿಸುವ ಯಂತ್ರಗಳು ಇರದಿದ್ದ ಕಾರಣ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸಿಸುತ್ತಿದ್ದ ಜನರಿಗೆ ಈ ಎಂಐಸಿ(M I C) ಅನಿಲದ ಸೋರಿಕೆ ಹಾಗೂ ಅದರಿಂದ ಉಂಟಾಗಬಹುದಾದ ಅಪಾಯದ ತೀವ್ರತೆ ಬಗ್ಗೆ ಮಾಹಿತಿ ದೊರಕಲು ಸಾಧ್ಯವಾಗಲಿಲ್ಲ.

ಸುಮಾರು 30ಮೀಟರ್ ಎತ್ತರದ ಒಂದು ಚಿಮಣಿಯಿಂದ ಹೊರಬಂದ ಎಂಐಸಿ ಅನಿಲವು ನಗರ ಪ್ರದೇಶದ ಕಡೆಗೆ ಹರಡಿತು ಹಾಗೂ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿದ್ದು ಮತ್ತು ಎಂಐಸಿ ಅನಿಲದ ಸಾಂದ್ರತೆ ಕೂಡ ಹೆಚ್ಚಾಗಿದ್ದ ಕಾರಣ ಅದು ಭೂಮಿಯ ಮಟ್ಟಕ್ಕೆ ಸಮೀಪದಲ್ಲಿ ಸಂಚರಿಸ ತೊಡಗಿತು ಇದರಿಂದಾಗಿ ಸುತ್ತಮುತ್ತಲಿನ ನಿವಾಸಿಗರಿಗೆ ಎಂಐಸಿ (M I C) ಅನಿಲದ ಅಪಾಯದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಈ ಕಾರ್ಖಾನೆಯಲ್ಲಿ ಕಾರ್ಬರಿಲ್ ಎಂಬ ಒಂದು ಕೀಟನಾಶಕ ಪದಾರ್ಥವನ್ನು ತಯಾರಿಸಿ ಅದನ್ನು ಸೆವಿನ್ ಎಂಬ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದರು. ಆ ಕೀಟನಾಶಕ ಪದಾರ್ಥ ತಯಾರಿಕೆಯಲ್ಲಿ ಎಂಐಸಿ ಮಿಥೇಲ್ ಐಸೋ ಸೈನೈಟ್ ಅನಿಲವನ್ನು ಮಧ್ಯಂತರ ಕಚ್ಚಾ ವಸ್ತುವಾಗಿ ಕಂಪನಿಯಲ್ಲಿ ಉಪಯೋಗಿಸುತ್ತಿದ್ದರು. ಏಕೆಂದರೆ ಎಂ ಐ ಸಿ (M I C) ಅನಿಲವು ಬಹಳ ಅಪಾಯಕಾರಿ ಹಾಗೂ ಪರಿಣಾಮಕಾರಿಯಾದ ವಸ್ತುವಾಗಿದ್ದರು ಕೂಡ ಅದು ಬಹಳ ಕಡಿಮೆ ಬೆಲೆಗೆ ಸಿಗುತ್ತಿತ್ತು. ಆದ್ದರಿಂದ ಕಂಪನಿಯು ತನ್ನ ವೈಯಕ್ತಿಕ ಬೆಳವಣಿಗೆ ಗೋಸ್ಕರ ಹಾಗೂ ಖರ್ಚುಗಳನ್ನು ಕಡಿಮೆ ಮಾಡುವ ಉದ್ದೇಶದಿಂದಾಗಿ ಎಂಐಸಿ(M I C)ಅನಿಲವನ್ನು ಬಹಳ ದೊಡ್ಡ ದೊಡ್ಡ ಟ್ಯಾಂಕಗಳಲ್ಲಿ ಶೇಖರಿಸಿಟ್ಟು ಉಪಯೋಗಿಸುತ್ತಿದ್ದರು.

ಭೂಪಾಲ್ ನಲ್ಲಿ ನೆಲೆಸಿದ್ದ ಆ ಕಂಪನಿಯಲ್ಲಿ ಪುರಾತನ ಕಾಲದ ತಂತ್ರಜ್ಞಾನದ ಬಳಕೆ, ಕಡಿಮೆ ದರ್ಜೆಯ ಯಂತ್ರಗಳು, ಹಾಗೂ ಉನ್ನತ ಶ್ರೇಣಿಯ ಸಂರಕ್ಷಣಾ ಕಾರ್ಯಾಚರಣೆಗಳು ಬಳಕೆಯಲ್ಲಿ ಇಲ್ಲದಿದ್ದರಿಂದ ಈ ದುರ್ಘಟನೆ ನಡೆದಿದೆ. ಈ ದೊಡ್ಡ ದುರಂತಕ್ಕೂ ಮುನ್ನ ಹಲವಾರು ಸಣ್ಣಪುಟ್ಟ ಘಟನೆಗಳು ಆ ಕಂಪನಿಯಲ್ಲಿ ನಡೆದು ಕೆಲವರಿಗೆ ಅದರಿಂದ ತೊಂದರೆಗಳು ಉಂಟಾಗಿದ್ದರೂ ಕೂಡ ಕಾರ್ಖಾನೆಯ ಮಾಲೀಕರ ನಿರ್ಲಕ್ಷ್ಯದಿಂದಾಗಿ ಇಂತಹ ಒಂದು ದೊಡ್ಡ ದುರಂತ ನಡೆದು ಹೋಗಿದೆ.

 ಅಂತರಾಷ್ಟ್ರೀಯ ಕಂಪನಿಗಳು ಭಾರತಕ್ಕೆ ಬಂದು ನೆಲೆಸುವ ಕಾರಣಗಳೇನೆಂದರೆ, ಬಹಳ ಸುಲಭವಾಗಿ ಕಡಿಮೆ ಸಂಬಳಕ್ಕೆ ಎಷ್ಟೇ ಕಷ್ಟವಾದ ಕೆಲಸವಾದರೂ ಕೂಡ ಯಾವುದೇ ನಿರೀಕ್ಷೆಗಳಿಲ್ಲದೆ ಹೊಟ್ಟೆಪಾಡಿಗೋಸ್ಕರ ಕೆಲಸ ಮಾಡಲು ಕಾರ್ಮಿಕರು ತಯಾರಾಗಿರುತ್ತಾರೆ. ಮುಂದುವರೆದ ರಾಷ್ಟ್ರಗಳಲ್ಲಿ ಇದೇ ಕೆಲಸಕ್ಕೆ ಸುಮಾರು ನಾಲ್ಕು ಪಟ್ಟು ಹೆಚ್ಚು ಸಂಬಳ ನಿರೀಕ್ಷೆ ಮಾಡುವ ಕಾರ್ಮಿಕರಿರುವುದರಿಂದ ಆ ಖರ್ಚು ವೆಚ್ಚಗಳನ್ನು ಕಡಿಮೆ ಮಾಡುವ ಉದ್ದೇಶದಿಂದಾಗಿ ಅಂತರಾಷ್ಟ್ರೀಯ ಕಂಪನಿಗಳು ಮುಂದುವರೆಯುತ್ತಿರುವ ರಾಷ್ಟ್ರಗಳ ಕಡೆಗೆ ಒಲಸೆ ಬಂದು ತಮ್ಮ ಕಾರ್ಖಾನೆಗಳನ್ನು ಸ್ಥಾಪಿಸುತ್ತಾರೆ. ಈ ರೀತಿ ಮಾಡುವುದರಿಂದ ಕಂಪನಿಗಳಿಗೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡೆಯುವುದಕ್ಕೆ ಸಾಧ್ಯವಾಗುತ್ತದೆ.

ಭೂಪಾಲ್ ನಲ್ಲಿ ನೆಲೆಸಿದ್ದ ಈ ಕಾರ್ಖಾನೆಯಲ್ಲಿಯೂ ಕೂಡ ಇದೇ ರೀತಿ ಲಾಭ ಹೆಚ್ಚು ಪಡೆಯುವ ಉದ್ದೇಶದಿಂದಾಗಿ 1980ರಿಂದ 1984ರ ನಡುವೆ ಎಮ್ ಐ ಸಿ ಯಂತ್ರಗಳನ್ನು ನೋಡಿಕೊಳ್ಳುತ್ತಿದ್ದ ಕಾರ್ಮಿಕರ ಸಂಖ್ಯೆ12ರಿಂದ6ಕ್ಕೆಇಳಿಸಲಾಯಿತು. ಹಾಗೂ ಸಂರಕ್ಷಣಾ ಕಾರ್ಯಾಚರಣೆ ತರಬೇತಿಯ ಅವಧಿಯಲ್ಲಿಯೂ ಕೂಡ ವೆಚ್ಚ ಕಡಿಮೆ ಮಾಡುವ ಉದ್ದೇಶದಿಂದಾಗಿ ಆರು ತಿಂಗಳು ನಡೆಯಬೇಕಾದ ತರಬೇತಿಯನ್ನು ಬರೆ ಹದಿನೈದು ದಿವಸಗಳಿಗೆ ಇಳಿಸಿದ್ದು ಕಂಪನಿಯ ಮಾಲೀಕರ ನಿರ್ಲಕ್ಷ್ಯವನ್ನು ತೋರಿಸುತ್ತದೆ,ಹಾಗೂಸರ್ಕಾರದಿಂದ ಈ ರೀತಿಯಾದ ಒಂದು ಅಪಾಯಕಾರಿ ಕಾರ್ಖಾನೆ ಬಂದು ನೆಲೆಸಿ ಸುತ್ತಮುತ್ತಲಿನ ಪ್ರದೇಶದ ನಿವಾಸಿಗರಿಗೆ ತೊಂದರೆಗಳು ಉಂಟಾಗಬಹುದು ಎಂಬ ಅರಿವು ಇದ್ದರೂ ಸಹ ಅನುಮತಿಯನ್ನು ನೀಡಿರುವುದು ಸರ್ಕಾರಿ ಕರ್ಮಚಾರಿಗಳ ನಿರ್ಲಕ್ಷವನ್ನು ಸಹ ಇಲ್ಲಿ ಕಾಣಬಹುದಾಗಿದೆ.1978ರಲ್ಲಿ ಕೆಲ ಮುನಿಸಿಪಾಲ್ ಸದಸ್ಯರು ಈ ಎಂಐಸಿ ಘಟಕದ ಸ್ಥಾಪನೆಯನ್ನು ವಿರೋಧಿಸಿದಾಗ ಇದರಿಂದ ಆಗಬಹುದಾದ ಅಪಾಯಗಳ ಪಟ್ಟಿ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರೂ ಸಹ ಸರ್ಕಾರ ಇದರ ಬಗ್ಗೆ ಗಮನ ಕೊಡದೆ ಕಾರ್ಖಾನೆಯ ಸ್ಥಾಪನೆಗೆ ಅನುಮತಿ ನೀಡಿತು. ಏಕೆಂದರೆ ಇದರಿಂದಾಗಿ ಸರ್ಕಾರದ ಖಜಾನೆ ತುಂಬುವುದೆಂದು ಹಾಗೂ ಭೂಪಾಲ್ ನಗರದ ನಾಗರಿಕರಿಗೆ ಕೆಲಸದ ಅವಕಾಶಗಳು ಹೆಚ್ಚಾಗಿ ಸಿಗುವುದೆಂಬ ನಂಬಿಕೆಯಿಂದ ಸರ್ಕಾರ ಈ ರೀತಿ ಕ್ರಮ ಜಾರಿಗೆ ತಂದಿತು.

ಅನಿಲ ಸೋರಿಕೆಯಿಂದಾದ ಪರಿಣಾಮಗಳು

1984ರ ಡಿಸೆಂಬರ್ 2ಮತ್ತು3ನೇಮಧ್ಯರಾತ್ರಿಯಲ್ಲಿ ನಡೆದ ಈ ಭಯಾನಕವಾದ ಘಟನೆ ಯಾಗಿ ತಕ್ಷಣವೇ ಸುಮಾರು 3000ಜನರು ನಿಧನ ಹೊಂದಿದರು. ಈ ಘಟನೆ ನಡೆದು ಒಂದು ವಾರದೊಳಗೆ ಸುಮಾರು8,000ಕ್ಕೂ ಹೆಚ್ಚು ಜನರು ಎಂಐಸಿ ಅನಿಲದ ಪರಿಣಾಮದಿಂದಾಗಿ ನಿಧನ ಹೊಂದಿದ್ದಾರೆ. ಎಂಐಸಿ ಅನಿಲ ಸೋರಿಕೆಯಿಂದಾಗಿ ಇದರ ನೇರ ಪರಿಣಾಮ ಸುಮಾರು 5ಲಕ್ಷಕ್ಕೂ ಹೆಚ್ಚು ಜನರಿಗೆ ಅನೇಕ ರೀತಿಯಲ್ಲಿ ತೊಂದರೆಗಳು ಉಂಟಾಗಿರುತ್ತದೆ. ಇಷ್ಟೇ ಅಲ್ಲದೆ ಇದರಿಂದಾಗಿ ಪರಿಸರಕ್ಕೂ ಹಾನಿ ಉಂಟಾಗಿರುತ್ತದೆ ಎಂಐಸಿ ಅನಿಲವನ್ನು ಸೇವಿಸಿದ ಜನರಿಗೆ ಉಂಟಾಗಬಹುದಾದಂತ ಕೆಲ ಪರಿಣಾಮಗಳೇನೆಂದರೆ ಕೆಮ್ಮು, ಎದೆ ನೋವು, ತೀವ್ರ ಮಟ್ಟದಲ್ಲಿ ಉಸಿರಾಟಕ್ಕೆ ತೊಂದರೆ, ಹೊಟ್ಟೆ ನೋವು, ಕಣ್ಣು ಕೆಂಪಗಾಗುವಿಕೆ, ಮೂರ್ಛೆ ರೋಗದ ಸಾಧ್ಯತೆ, ಹೃದಯಾಘಾತ ಮತ್ತು ಸಾವು. ಈ ಅನಿಲದ ಸೋರಿಕೆಯಿಂದಾದ ಮತ್ತೊಂದು ಪರಿಣಾಮವೇನೆಂದರೆ ಆ ಸಮಯದಲ್ಲಿ ಜನಿಸಿದ ಮಕ್ಕಳಿಗೆ ಹಲವಾರು ಜನ್ಮ ಸಂಬಂಧಿತ ಕಾಯಿಲೆಗಳು ಹಾಗೂ ಬುದ್ಧಿಮಾಂದ್ಯತೆ,ಆಸ್ತಮಾ ರೀತಿಯ ಕಾಯಿಲೆಗಳು, ಕ್ಯಾನ್ಸರ್ ರೀತಿಯ ಹಲವಾರು ಗಂಭೀರ ಸಮಸ್ಯೆಗಳಿಂದ ಅಲ್ಲಿಯ ಜನರು ನರಳುತ್ತಿದ್ದಾರೆ ಈ ದುರ್ಘಟನೆ ನಡೆದು 28ವರ್ಷಗಳಾದರೂ ಸಹ ಎಂದಿಗೂ ಆ ಪ್ರದೇಶದಲ್ಲಿ ಹಲವಾರು ಟನ್ಗಳಷ್ಟುಅಪಾಯಕಾರಿ ರಾಸಾಯನಿಕ ಪದಾರ್ಥಗಳು ಅಲ್ಲಿಯ ಪರಿಸರವನ್ನು ನಾಶ ಮಾಡುತ್ತಿದ್ದು ಭೂಮಿಯ ಗುಣಮಟ್ಟ ಮತ್ತು ಅಂತರ್ಜಲ ಸಂಪನ್ಮೂಲವನ್ನು ಸಹ ನಾಶ ಮಾಡಿದೆ.

 ಕೆಲ ತಜ್ಞರು ನಡೆಸಿದ ಸಮೀಕ್ಷೆ ಪ್ರಕಾರ ಎಂಐಸಿ ಅನಿಲದೊಂದಿಗೆ ಮತ್ತಿತರ ಕೆಲವು ಅನಿಲಗಳು ಮಿಶ್ರಣಗೊಂಡು ಹರಡಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಅವು ಯಾವುದೆಂದರೆ ಕ್ಲೋರಿನ್,ಮಾನೋ ಮಿಥೈಲ್ ಅಮೀನ್,ಫೋಸ್ಜಿನ್(Phosgene(COCl)) ಕಾರ್ಬನ್ ಟೆಟ್ರಾಕ್ಲೋರೈಡ್, ಹೈಡ್ರೋಜನ್ ಕ್ಲೋರೈಡ್, ಕಾರ್ಬನ್ ಮೋನಾಕ್ಸೈಡ್ ಮತ್ತು ಹೈಡ್ರೋಜನ್ ಸೈನೈಟ್. ಈ ರೀತಿಯಾದಂತಹ ಬಹಳ ಅಪಾಯಕಾರಿ ಹಾಗೂ ಪರಿಣಾಮಕಾರಿಯಾದ ಅನಿಲಗಳು ಇಂದಿಗೂ ಸಹ ಕಾರ್ಖಾನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯಾಪಕವಾಗಿ ಸೇರಿಕೊಂಡಿದ್ದು ಅದನ್ನು ಸರಿಪಡಿಸುವ ನೇರ ಹೊಣೆ ಕಾರ್ಖಾನೆಯ ಮಾಲೀಕರು ಹಾಗೂ ಸರ್ಕಾರದಾಗಿರುತ್ತದೆ.

 ಈ ಧಾರಣ ಘಟನೆ ನಡೆದು 28ವರ್ಷಗಳಾದರೂ ಸಹ ಸರ್ಕಾರದಿಂದ ಪೀಡಿತರಿಗೆ ಸಿಗಬೇಕಾದ ನ್ಯಾಯ ದೊರಕಿಲ್ಲ ಪೀಡಿತರಲ್ಲಿ ಸುಮಾರು ಮಂದಿ ಬಡ ಜನಾಂಗಕ್ಕೆ ಸೇರಿದ್ದು ಘಟನೆಯ ನಂತರ ಅವರುಗಳಿಗೆ ಸವಲತ್ತು, ಹಣಕಾಸಿನ ಸಹಾಯ, ಔಷಧೂಪಚಾರಗಳು, ನೌಕರಿಯ ಅವಕಾಶಗಳು... ಇವೆಲ್ಲವೂ ಸರ್ಕಾರದಿಂದ ಸರಿಯಾದ ಸಮಯದಲ್ಲಿ ಪ್ರಮಾಣದಲ್ಲಿ ಸಿಗದಿದ್ದ ಕಾರಣಅವರು ಅವಕಾಶ ವಂಚಿತರಾಗಿ ಇಂದಿಗೂ ಸಹ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ.

ಭೂಪಾಲ್ ನಲ್ಲಿ ನಡೆದ ಈ ಘಟನೆಯಾ ನಂತರ ಭಾರತದಲ್ಲಿ ಅಷ್ಟೇ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲೂ ಸಹ ಕೋಟ್ಯಾಂತರ ಜನರು ಈ ಘಟನೆಯನ್ನು ವಿರೋಧಿಸಿ ಉಗ್ರ ಹೋರಾಟ ನಡೆಸಿದ್ದಾರೆ 1985ರಲ್ಲಿ ಸರ್ಕಾರವು ಜನರ ಪರವಾಗಿ ಆ ಕಾರ್ಖಾನೆಯ ಮಾಲೀಕರ ವಿರುದ್ಧ ನ್ಯಾಯಾಲಯದಲ್ಲಿ ಒಂದು ಸಿವಿಲ್ ಕೇಸ್ ದಾಖಲು ಮಾಡಿದ್ದರೂ ಸಹ ಪೀಡಿತರಿಗೆ ಸಿಗಬೇಕಾದ ನಿಗದಿತ ಧನ ಸಹಾಯವನ್ನು ಪಡೆಯುವುದಕ್ಕೆ ಸಾಧ್ಯವಾಗಲಿಲ್ಲ. ದುರಂತಕ್ಕೆ ಸಿಲುಕಿ ನರಳುತ್ತಿರುವ ಅಮಾಯಕ ಜನರು ಇತರ ಭೂಪಾಲ್ ನಿವಾಸಿಗರು ಸಾಮಾಜಿಕ ಕಾರ್ಯಕರ್ತರು ಮತ್ತಿತರ ಸಂಘ ಸಂಸ್ಥೆಗಳು ಅಂತರರಾಷ್ಟ್ರೀಯ ಸಂಸ್ಥೆಗಳು ಇವರೆಲ್ಲರೂ ಇಂದಿಗೂ ಕೂಡ ತಮ್ಮ ಹೋರಾಟವನ್ನು ನಡೆಸುತ್ತಾ ಬಂದಿದ್ದರೂ ಸಹ ನೊಂದ ಜನರಿಗೆ ಸಂಪೂರ್ಣವಾಗಿ ಪರಿಹಾರ ದೊರಕಿಸಿಕೊಡಲು ಸಾಧ್ಯವಾಗಲಿಲ್ಲ ಆದರೆ ನಮ್ಮ ದೇಶದಲ್ಲಿ ಇರುವ ಹಲವಾರು ಕಾರ್ಖಾನೆಗಳಲ್ಲಿ ಮಾಲೀಕರ ನಿರ್ಲಕ್ಷಿತನ ಖರ್ಚು ವೆಚ್ಚಗಳನ್ನು ಕಡಿಮೆ ಮಾಡುವ ಉದ್ದೇಶ ಹಾಗೂ ನಮ್ಮ ದೇಶದ ಕಾನೂನಿನಲ್ಲಿ ಇರುವ ಲೋಪದೋಷಗಳಿಂದಾಗಿ ಇಂತಹ ದುರ್ಘಟನೆಗಳು ಸಂಭವಿಸುತ್ತದೆ. ಈ ರೀತಿ ಘಟನೆಗಳುಮರುಕಳಿಸಬಾರದೆಂದರೆ, ಸರ್ಕಾರವು ನಮ್ಮ ಕಾನೂನಿನಲ್ಲಿ ಇರುವ ಲೋಪದೋಷಗಳನ್ನು ಗುರುತಿಸಿ ಅದನ್ನು ಸರಿಪಡಿಸಿ ಶಿಸ್ತಿನ ಕ್ರಮ ಜಾರಿಗೆ ತರುವುದಲ್ಲದೆ ಇಂತಹ ದುರ್ಘಟನೆಗಳಿಗೆ ಕಾರಣರಾದವರೆಗೆ ಶಿಕ್ಷೆ ಕೊಡಿಸುವುದರಲ್ಲಿ ಯಶಸ್ವಿ ಆಗಬೇಕು.

 ಒಂದು ರಾಸಾಯನಿಕ ಕಾರ್ಖಾನೆ ಸ್ಥಾಪಿಸುವ ಮುನ್ನ ಸೂಕ್ತವಾದ ತಂತ್ರಜ್ಞಾನದ ಬಳಕೆ, ಸೂಕ್ತ ಸ್ಥಳದ ಆಯ್ಕೆ, ಹಾಗೂ ಉನ್ನತ ಮಟ್ಟದ ಸಂರಕ್ಷಣಾ ಕಾರ್ಯಾಚರಣೆಗಳ ಬಳಕೆ ಮತ್ತು ಇತರ ಮಾಹಿತಿಗಳನ್ನು ಸಂಗ್ರಹಿಸಿ ಸ್ಥಾಪಿಸುವುದು ಕ್ಷೇಮ. ಸಾಧ್ಯವಾದರೆಇಂತಹ ರಾಸಾಯನಿಕ ಕಾರ್ಖಾನೆಗಳು ನಗರ ಪ್ರದೇಶದಿಂದ ದೂರ ಅಂದರೆ ಜನರಿಗೆ ಪ್ರಾಣಿ ಪಕ್ಷಿಗಳಿಗೆ ಮತ್ತು ಪರಿಸರಕ್ಕೆ ತೊಂದರೆ ಉಂಟಾಗದಿರುವ ಸ್ಥಳವನ್ನು ಆಯ್ಕೆ ಮಾಡುವುದು ಸೂಕ್ತ.  ಕಾರ್ಖಾನೆಯ ವತಿಯಿಂದ ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸುತ್ತಮುತ್ತಲಿನ ಪ್ರದೇಶದ ಜನರಿಗೆ ಆರೋಗ್ಯ ತಪಾಸಣೆ ಮಕ್ಕಳಿಗೆ ಶಿಕ್ಷಣ ಮತ್ತಿತರ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಒಂದುವೇಳೆ ಇಂತಹ ದುರ್ಘಟನೆಗಳು ನಡೆದು ಹೋದರೆ ತಕ್ಷಣವೇ ಕಾರ್ಖಾನೆಯ ವತಿಯಿಂದ ಅದರ ಅಪಾಯದ ಪ್ರಮಾಣವನ್ನು ಕಡಿಮೆ ಮಾಡುವ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು ಮತ್ತು ಸುತ್ತಮುತ್ತಲಿನ ಪ್ರದೇಶದ ನಿವಾಸಿಗರಿಗೆ ಸೂಕ್ತ ಮಾಹಿತಿಯನ್ನು ನೀಡಿ ಅವರುಗಳನ್ನು ಅಪಾಯದಿಂದ ಪಾರು ಮಾಡುವ ಜವಾಬ್ದಾರಿ ಕಾರ್ಖಾನೆಯ ಮಾಲೀಕರಾಗಿರುತ್ತದೆ.

ಜಪಾನಿನ ಹಿರೋಶಿಮಾ ಮತ್ತು ನಾಗಸಾಕಿ ನಗರದಲ್ಲಿ ನಡೆದ ದುರಂತ ಮತ್ತು ಭೂಪಾಲ್,ನ ಈ ಅನಿಲ ದುರಂತ ಇಂತಹ ಘಟನೆಗಳಿಂದಾಗಿ ಲಕ್ಷಾಂತರ ಅಮಾಯಕ ಜನರಪ್ರಾಣ ಹಾನಿಯಾಗಿದ್ದು ಮುಂದಿನ ಪೀಳಿಗೆಗೂ ಇದರ ಅಪಾಯ ತಪ್ಪಿದ್ದಲ್ಲ ಇನ್ನೊಮ್ಮೆ ಇಂತಹ ಘಟನೆಗಳು ಮರುಕಳಿಸಬಾರದೆಂಬ ಆಶಯ ನಮ್ಮದಾಗಿರುತ್ತದೆ.

ಧನ್ಯವಾದಗಳು.

Comments

Popular posts from this blog

Ideas from an arm-chair educationist :