Pi day
ಶಾಲೆಯಲ್ಲಿ ಪೈ ದಿನ ( ಪೈ ಬಗ್ಗೆ ಮಾಹಿತಿ ಮತ್ತು ಪ್ರಯೋಗಗಳು) ಪೈ ಎಂಬುದು ಗಣಿತ ಶಾಸ್ತ್ರದಲ್ಲಿ ಬರುವ ಒಂದು ಸ್ಥಿರಾಂಕ . ಇದು ವೃತ್ತಾಕಾರದ ವಸ್ತುವನ್ನು ಲೆಕ್ಕ ಮಾಡಲು ಅನಿವಾರ್ಯ. ಇದರ ಬೆಲೆಯು ಅಂದಾಜಾಗಿ 22/7 ಅಥವಾ 3.141. ಜುಲೈ 22 ನ್ನು 22/7 ಎಂದು ಬರೆಯುವುದರಿಂದ ಆ ದಿನವನ್ನು ಪೈ ದಿನ ಎಂದು ಆಚರಿಸುತ್ತಾರೆ. Π ಎಂಬುದು ವೃತ್ತದ ಪರಿಧಿ ಮತ್ತು ವ್ಯಾಸದ ಅನುಪಾತ ( π =C/D) . Π ಬೆಲೆ ಕಂಡು ಹಿಡಿಯುವ ವಿಧಾನಗಳು : ಕೆಳಕಂಡ ಪ್ರಯೋಗಗಳನ್ನು ಮೂರು ವಿಭಿನ್ನ ರೀತಿಯಲ್ಲಿ ಮಾಡಿ ಸರಾಸರಿ ಕಂಡು ಹಿಡಿಯಿರಿ. 1. ಕಾರ್ಡ್ ಬೋರ್ಡಿನಲ್ಲಿ ಒಂದು ವೃತ್ತವನ್ನು ರಚಿಸಿ . ಅದರ ವ್ಯಾಸಗಳನ್ನು ಕತ್ತರಿಸಿ. 16 ಅಥವಾ ಇನ್ನೂ ಹೆಚ್ಚು ಸಮ ಭಾಗಗಳನ್ನಾಗಿ ಮಾಡಿ . ಈಗ ಕತ್ತರಿಸಿದ ತ್ರಿಭುಜಗಳನ್ನು ಆಯತಾಕಾರದಲ್ಲಿ ಜೋಡಿಸಿ . ಆಯತದ ಉದ್ದ ಮತ್ತು...